Wednesday, 10 September 2014

Onam & Teachers Day Celeberations

Onam & Teachers Day Celeberated in our School on 05-09-2014 with various programmes








ಗುರುವಂದನೆ ಮತ್ತು ಓಣಂ ಆಚರಣೆ
ಕುಂಜತ್ತೂರು: ಸೆ.5: ಕುಂಜತ್ತೂರು ಸರಕಾರೀ ಪ್ರೌಢಶಾಲೆಯಲ್ಲಿ ಸೆಪ್ಟಂಬರ್ 5ರಂದು ಬಹುಸಂಭ್ರಮದಿಂದ ಗುರುವಂದನೆ ಮತ್ತು ಓಣಂನ್ನು ಆಚರಿಸಲಾಯಿತು.ಶಿಕ್ಷಕರು ರಚಿಸಿದ 'ಪೂಕಳಂ'ನ ಮುಂದೆ ದೀಪವನ್ನು ಬೆಳಗುವುದರೊಂದಿಗೆ ಸಮಾರಂಭವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರ್.ಟಿ. ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಫ್ತಾಬ್ ಪಿ.ಸಿ. ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಹೂಗುಚ್ಛವನ್ನು ನೀಡುವುದರೊಂದಗೆ
ಗುರುಗಳನ್ನು ಗೌರವಿಸಿದರು.ಬಳಿಕ ಓಣಂ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ,ಹಗ್ಗ ಜಗ್ಗಾಟ,ಚೆಂಡಾಟ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ಓಣಂ ಭೋಜನ ಕೂಟವು ನಡೆಯಿತು.ಮಧ್ಯಾಹ್ನ ನಂತರ ಪ್ರಧಾನಮಂತ್ರಿಗಳೊಂದಿಗಿನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು.

No comments:

Post a Comment