Friday 3 July 2015


World Anti Drugs Day Celebrated in the School. Various programmes, including Rally arranged in the leadership of Student Police Cadet (SPC) wing of the school.
 
ಕುಂಜತ್ತೂರು ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
ಕುಂಜತ್ತೂರು: ಕುಂಜತ್ತೂರು ಜಿ.ವಿ.ಎಚ್.ಎಸ್.ಎಸ್.ಶಾಲೆಯಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು.ಅಬಕಾರಿ ಇಲಾಖೆಯ ಸಿವಿಲ್ ಎಕ್ಸೈಸ್ ಅಧಿಕಾರಿಯಾದ ಶ್ರೀ ನಾರಾಯಣ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ "ಪ್ರಸ್ತುತ ಮದ್ಯ ಸೇವನೆಯ ಸರಾಸರಿ ವಯಸ್ಸು ಹನ್ನೆರಡು ಆಗಿದೆ.ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಈ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದುಅತ್ಯಂತ ಕಳವಳಕಾರಿ" ಎಂಬುದಾಗಿ ನುಡಿದರು.ಇದೇ ಸಂದರ್ಭದಲ್ಲಿ ಮಾದಕ ವ್ಯಸನಗಳು ಉಂಟುಮಾಡುವ ಆರೋಗ್ಯ ಸಂಬಂಧೀ ತೊಂದರೆಗಳ ಕುರಿತು ಸಾದ್ಯಂತವಾಗಿ ತಿಳಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ದಿನೇಶ.ವಿ. ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಅನಿತಾ ವಂದಿಸಿದರು.

No comments:

Post a Comment