Saturday 25 June 2016

ಯೋಗ ದಿನಾಚರಣೆ


ವಿಶ್ವಯೋಗ ದಿನಾಚರಣೆ

ಕುಂಜತ್ತೂರು:- ಸರಕಾರಿ ಪ್ರೌಢಶಾಲೆ ಕುಂಜತ್ತೂರಿನಲ್ಲಿ ವಿಶ್ವಯೋಗ ದಿನವನ್ನು ಜೂನ್ 21ರಂದು ಆಚರಿಸಲಾಯಿತು. ಶಾಲೆಯ ನಿವೃತ್ತ ಶಿಕ್ಷಕರೂ, ಎಸ್.ಎ೦.ಸಿ ಸದಸ್ಯರೂ ಆಗಿರುವ ಶ್ರೀ ಈಶ್ವರ ದಿನನಿತ್ಯದ ಬದಕಿನಲ್ಲಿ ಯೋಗದ ಮಹತ್ವದ ಕುರಿತು ತಿಳಿಸಿದರು. ಆರೋಗ್ಯ ಆನಂದದಾಯಕ ಬಾಳಿಗೆ ಯೋಗ ನಮ್ಮ ಸಹವರ್ತಿಯಾಗಿರಬೇಕು ಎ೦ದು ನುಡಿದರು. ಪ್ರಾಣಾಯಾಮದ ಪ್ರಾತ್ಯಕ್ಷಿಕೆಯನ್ನು ಅವರು ನೀಡಿ ವಿದ್ಯಾರ್ಥಿಗಳಿಗೆ ಪ್ರಾಣಾಯಾಮವನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಗಸ್ಟಿನ್ ಬರ್ನಾಡ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಅನಿತಾ ವಂದಿಸಿದರು. ಶಾಲ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No comments:

Post a Comment