Thursday, 16 July 2015
Friday, 3 July 2015
World Anti Drugs Day Celebrated in the School. Various programmes, including Rally arranged in the leadership of Student Police Cadet (SPC) wing of the school.
ಕುಂಜತ್ತೂರು
ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ
ಜಾಗೃತಿ ಕಾರ್ಯಕ್ರಮ
ಕುಂಜತ್ತೂರು:
ಕುಂಜತ್ತೂರು
ಜಿ.ವಿ.ಎಚ್.ಎಸ್.ಎಸ್.ಶಾಲೆಯಲ್ಲಿ
ಮಾದಕ ದ್ರವ್ಯದ ದುಷ್ಪರಿಣಾಮಗಳ
ಕುರಿತ ಜಾಗೃತಿ ಕಾರ್ಯಕ್ರಮವು
ವಿದ್ಯಾರ್ಥಿಗಳಿಗಾಗಿ
ನಡೆಸಲಾಯಿತು.ಅಬಕಾರಿ
ಇಲಾಖೆಯ ಸಿವಿಲ್ ಎಕ್ಸೈಸ್
ಅಧಿಕಾರಿಯಾದ ಶ್ರೀ ನಾರಾಯಣ
ವಿದ್ಯಾರ್ಥಿಗಳನ್ನುದ್ದೇಶಿಸಿ
ಮಾತನಾಡುತ್ತಾ "ಪ್ರಸ್ತುತ
ಮದ್ಯ ಸೇವನೆಯ ಸರಾಸರಿ ವಯಸ್ಸು
ಹನ್ನೆರಡು ಆಗಿದೆ.ಇಷ್ಟು
ಚಿಕ್ಕ ವಯಸ್ಸಿನಲ್ಲೇ ಮಕ್ಕಳು
ಈ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದುಅತ್ಯಂತ
ಕಳವಳಕಾರಿ"
ಎಂಬುದಾಗಿ
ನುಡಿದರು.ಇದೇ
ಸಂದರ್ಭದಲ್ಲಿ ಮಾದಕ ವ್ಯಸನಗಳು
ಉಂಟುಮಾಡುವ ಆರೋಗ್ಯ ಸಂಬಂಧೀ
ತೊಂದರೆಗಳ ಕುರಿತು ಸಾದ್ಯಂತವಾಗಿ
ತಿಳಿಸಿದರು.
ಶಾಲಾ
ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ದಿನೇಶ.ವಿ.
ಸ್ವಾಗತಿಸಿ
ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ
ಅನಿತಾ ವಂದಿಸಿದರು.
Thursday, 25 June 2015
Vayana Varam Celebration
ಓದುವ
ಹವ್ಯಾಸದಿಂದ ವ್ಯಕ್ತಿತ್ವ ವಿಕಸನ
ಸಾಧ್ಯ
ಕುಂಜತ್ತೂರು:
ಕುಂಜತ್ತೂರು
ಜಿ.ವಿ.ಹೆಚ್.ಎಚ್.ಎಸ್.ಎಸ್.ಶಾಲೆಯಲ್ಲಿ
ವಾಚನಾ ಸಪ್ತಾಹದ ಅಂಗವಾಗಿ ನಡೆದ
ಪುಸ್ತಕ ಪ್ರದರ್ಶನ ಹಾಗೂ ವಿವಿಧ
ಸಾಹಿತ್ಯಿಕ ಸ್ಫರ್ಧೆಗಳ ಉದ್ಘಾಟನೆಯು
ದಿನಾಂಕ 24-6-2015
ರ
ಬುಧವಾರದಂದು ಶಾಲಾ ಸಭಾಂಗಣದಲ್ಲಿ
ಜರುಗಿತು.
ಉದ್ಘಾಟನೆಯನ್ನು
ನೆರವೇರಿಸಿ ಮಾತನಾಡಿದ ಪುಸ್ತಕ
ಪ್ರೇಮಿ ಹಾಗೂ ಪುಸ್ತಕ ಸಂಗ್ರಹಗಾರ
ಶ್ರೀ ಕೆ.ಸುರೇಂದ್ರ
ಮಾತನಾಡುತ್ತಾ ಓದುವ ಹಾಗೂ ಪುಸ್ತಕ
ಸಂಗ್ರಹಿಸುವ ಹವ್ಯಾಸದಿಂದಾಗಿ
ನಮ್ಮ ವ್ಯಕ್ತಿತ್ವವನ್ನು
ವಿಕಸನಗೊಳಿಸಲು ಸಾಧ್ಯವಾಗುತ್ತದೆಯೆಂದು
ನುಡಿದರು.
ಈ
ಸಂಧರ್ಭದಲ್ಲಿ ಶ್ರೀ ಕೆ.ಸುರೇಂದ್ರ
ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ದಿನೇಶ್.ವಿ.
ಹಿರಿಯ
ಶಿಕ್ಷಕ ಶ್ರೀ ರಾಜಕುಮಾರ್
ಉಪಸ್ಧಿತರಿದ್ದರು.
ಕಾರ್ಯಕ್ರಮದ
ಸಂಯೋಜಕಿ ಶ್ರೀಮತಿ ಉಷಾರಾಣಿ
ಸ್ವಾಗತಿಸಿ ಶಿಕ್ಷಕರಾದ ಶ್ರೀ
ಸುರೇಶನ್ ವಂದಿಸಿದರು.
ಶಾಲಾ
ವಿದ್ಯಾರ್ಥಿಗಳು ಪ್ರದರ್ಶನದಲ್ಲಿರಿಸಿದ
ಪುಸ್ತಕಗಳನ್ನು ವೀಕ್ಷಿಸಿ
ಮೆಚ್ಚುಗೆ ವ್ಯಕ್ತಪಡಿಸಿದರು.
ವಾಚನಾ
ಸಪ್ತಾಹದ ಅಂಗವಾಗಿ ಇಂಗ್ಲೀಷ್
ಓದುವ ಸ್ಫರ್ಧೆ,
ಪುಸ್ತಕಗಳನ್ನು
ಓದಿ ಆಸ್ವಾದನಾ ಟಿಪ್ಪಣಿ ಬರೆಯುವ
ಸ್ಫರ್ಧೆ,
ಭಾಷಾಂತರಿಸುವ
ಸ್ಫರ್ಧೆ ಮುಂತಾದ ಸಾಹಿತ್ಯಿಕ
ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
Subscribe to:
Posts (Atom)