Wednesday 1 October 2014

ಕುಂಜತ್ತೂರು ಪ್ರೌಢಶಾಲೆಯಲ್ಲಿ ಬ್ಲಾಗ್ ಉದ್ಘಾಟನೆ
 ಕುಂಜತ್ತೂರು,ಒಕ್ಟೋಬರ್ 1: ಕುಂಜತ್ತೂರು ಸರಕಾರೀ ಪ್ರೌಢಶಾಲೆಯಲ್ಲಿ ಶಾಲಾ ಬ್ಲಾಗ್ ಉದ್ಘಾಟನೆಯನ್ನು ದಿನಾಂಕ  01-10-2014 ರಂದು ನೆರವೇರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಉದಯಶಂಕರ್.ಟಿ. ಅವರು ಬ್ಲಾಗ ನ್ನು ದೀಪ ಬೆಳಗಿಸಿ ಕಂಪ್ಯೂಟರ್ ಕ್ಲಿಕ್ ಮಾಡುವುದರ ಮೂಲಕ ಉದ್ಘಾಟಿಸಿದರು.ನಂತರ ಬ್ಲಾಗ್ ನ ಉಪಯೋಗಗ ಳ ಬಗ್ಗೆ  ಮಕ್ಕಳಿಗೆ ತಿಳಿಯಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಹಮ್ಮದ್ ಅಫ್ತಾಬ್ ಅವರು ವಹಿಸಿದ್ದರು.ಐ.ಟಿ.ಕೋ ಓರ್ಡಿನೇಟರ್ ಶ್ರೀ ಬಾಲಕೃಷ್ಣ.ಜಿ. ಅವರು ಬ್ಲಾಗ್ ನ ಬಗ್ಗೆ  ಪ್ರಾಸ್ತಾವಿಕವಾಗಿ ಮಾತನಾಡಿದರು.

         ಶಿಕ್ಷಕರಾದ ಶ್ರೀ ರಾಜಕುಮಾರ್  ಸ್ವಾಗತಿಸಿ  ಶಕ್ಷಕಿ ಶ್ರೀಮತಿ  ಸುಚೇತಾ ವಂದಿಸಿದರು.  ಶಿಕ್ಷಕರಾದ ಶ್ರೀ ದಿನೇಶ.ವಿ. ಕಾರ್ಯಕ್ರಮ ನಿರೂಪಿಸಿದರು.                                                                    ಬ್ಲಾಗ್  ವಿಳಾಸ:11009gvhsskunjathur.blogspot.in

No comments:

Post a Comment