Friday 31 October 2014


ಶಾಲಾ ಕಲೋತ್ಸವ
ಕುಂಜತ್ತೂರು,ಒಕ್ಟೋಬರ್ 30: ಕುಂಜತ್ತೂರು ಸರಕಾರೀ ಪ್ರೌಢಶಾಲೆಯ ಕಲೋತ್ಸವವು ಒಕ್ಟೋಬರ್ 29,30 ರಂದು ಜರುಗಿತು. ಕಲೋತ್ಸವದ ಉದ್ಘಾಟನೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಫ್ತಾಬ್.ಪಿ.ಸಿ. ಅವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀಯುತರು ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಬೇಕೆಂದು ನುಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರನ್.ಟಿ. ವಹಿಸಿದ್ದರು.ಹಿರಿಯ ಶಿಕ್ಷಕಿ ಶ್ರೀಮತಿ ಶ್ಯಾಮಲ ಹಾಗೂ ಶಿಕ್ಷಕರಾದ ಶ್ರೀ ಕಿಶೋರ್ ಕುಮಾರ್ ಶುಭಾಶಂಸನೆಗೈದರು. ಶಿಕ್ಷಕರಾದ ಶ್ರೀ ರಾಜಕುಮಾರ್ ಸ್ವಾಗತಿಸಿ ಕಲೋತ್ಸವದ ಸಂಚಾಲಕರಾದ ಶ್ರೀ ಸುರೇಶನ್ ವಂದಿಸಿದರು. ವಿದ್ಯಾರ್ಥಿನಿಯರಾದ ಸುಜ್ಞಾನ, ಪ್ರೀತಿ ಮತ್ತು ತಸ್ಲೀಮ ಪ್ರಾರ್ಥನೆ ಹಾಡಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment