Tuesday 21 October 2014

ಕುಂಜತ್ತೂರು,೨೦:ಸರಕಾರಿ ಪ್ರೌಢಶಾಲೆ ಕುಂಜತ್ತೂರಿನ ಶಾಲಾಮಟ್ಟದ ಕ್ರೀಡಾಕೂಟವು ಅಕ್ಟೋಬರ್ ೨೦, ೨೧ ನೇ ದಿನಾಂಕದಂದು ಶಾಲಾ ಆವರಣದಲ್ಲಿ ಜರಗಿತು. ಕ್ರೀಡಾಕೂಟವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮುಷ್ರತ್ ಜಹಾನ್ ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶಂಕರನ್.ಟಿ. ಧ್ವಜಾರೋಹಣಗೈದು ಕ್ರೀಡಾಕೂಟಕ್ಕೆ ಚಾಲನೆಯನ್ನಿತ್ತರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಫ್ತಾಬ್ ಅಧ್ಯಕ್ಷ ಸ್ಥಾನ ವಹಿಸಿ ವಿಧ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ನುಡಿದರು. ಶಾಲಾ ಆಡಳಿತ ಸಮಿತಿ ಸದಸ್ಯರೂ ನಿವೃತ್ತ ಶಿಕ್ಷಕರೂ ಶ್ರೀ ಈಶ್ವರ.ಎಮ್. ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಶಿಕ್ಷಕರಾದ ಶ್ರೀ ರಾಜಕುಮಾರ್ ಸ್ವಾಗತಿಸಿ , ಕ್ರೀಡಾಕೂಟದ ಸಂಯೋಜಕಿಯೂ, ದೈಹಿಕ ಶಿಕ್ಷಣದ ಶಿಕ್ಷಕಿಯೂ ಆದ ಶ್ರೀಮತಿ ಅನಿತಾ ವಂದಿಸಿದರು. ಶಾಲಾ ವಿಧ್ಯಾರ್ಥಿ ಸಂಘದ ನಾಯಕ ಅಬ್ದುಲ್ ರಾಝಿಕ್ ಪ್ರತಿಜ್ಞಾ ವಿಧಿ ನೆರವೇರಿಸಿದರು. ಶಿಕ್ಷಕರಾದ ಶ್ರೀಮತಿ ಸುಚೇತಾ, ಶ್ರೀ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment