Saturday, 22 August 2015
Saturday, 15 August 2015
Independence Day celebrations
ಕುಂಜತ್ತೂರು
ಶಾಲೆಯಲ್ಲಿ ಸ್ವಾತಂತ್ರ್ಯ
ದಿನಾಚರಣೆ
ಕುಂಜತ್ತೂರು,ಆಗಸ್ಟ್
೧೫ :
ಕುಂಜತ್ತೂರು
ಸರಕಾರಿ ಪ್ರೌಢ ಶಾಲೆಯಲ್ಲಿ ೬೯ನೇ
ಸ್ವಾತಂತ್ರ್ಯ
ದಿನಾಚರಣೆಯನ್ನು
ಬಹು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ
ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ದಿನೇಶ .ವಿ
ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ
ಶುಭ ಹಾರೈಸಿದರು.
ಬಳಿಕ
ಶಾಲಾ ಎಸ್.ಎಮ್.ಸಿಯ
ಸದಸ್ಯರೂ ನಿವೃತ್ತ ಶಿಕ್ಷಕರೂ
ಆದ ಶ್ರೀ ಈಶ್ವರ ಮಾಸ್ಟರ್ ಸ್ವಾತಂತ್ರ್ಯ
ದಿನದ ಸಂದೇಶವನ್ನು ವಿದ್ಯಾರ್ಥಿಗಳಿಗೆ
ನೀಡಿದರು.
ಶಾಲಾ
ಪೋಲೀಸ್ ದಳದ ಡ್ರಿಲ್ ಇನ್ ಸ್ಟ್ರಕ್ಟರ್
ಶ್ರೀ ಇಸ್ಮಾಯಿಲ್,
ಶಿಕ್ಷಕಿ
ಶ್ರೀಮತಿ ಲಲಿತಾ ಸ್ವಾತಂತ್ರ್ಯ
ದಿನದ ಶುಭಾಶಯಗಳನ್ನು ನೀಡಿದರು.
ಬಳಿಕ
ವಿದ್ಯಾರ್ಥಿಗಳಿಂದ ವೈವಿಧ್ಯಮಯ
ಸಾಂಸ್ಕೃತಿಕ ಕಾರ್ಯಕ್ರಮಗಳು
ಜರುಗಿದವು.
ಶಿಕ್ಷಕಿ
ಅಮಿತಾ ಸ್ವಾಗತಿಸಿ,
ಶಿಕ್ಷಕ
ಬಾಲಕೃಷ್ಣ ವಂದಿಸಿದರು.
ಶಿಕ್ಷಕಿ
ಸುಚೇತಾ ಕಾರ್ಯಕ್ರಮ ನಿರೂಪಿಸಿದರು.
Monday, 10 August 2015
ಕಯ್ಯಾರರಿಗೆ
ಭಾವಪೂರ್ಣ ಶ್ರದ್ಧಾಂಜಲಿ
ಕುಂಜತ್ತೂರು,ಆಗಸ್ಟ್
೧೦ :
ಕುಂಜತ್ತೂರು
ಸರಕಾರಿ ಪ್ರೌಢ ಶಾಲೆಯಲ್ಲಿ ಹಿರಿಯ
ಕವಿ,
ಸ್ವಾತಂತ್ರ್ಯ
ಹೋರಾಟಗಾರ ,
ಪ್ರಶಸ್ತಿ
ವಿಜೇತ ಶಿಕ್ಷಕರಾದ ಶ್ರೀ ಕಯ್ಯಾರ
ಕಿಞ್ಞಣ್ಣ ರೈಯವರಿಗೆ ಭಾವಪೂರ್ಣ
ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ಶಾಲಾ
ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ದಿನೇಶ ಹಾಗೂ ಶಿಕ್ಷಕಿ
ಕವಿತಾ
ಅಗಲಿದ ಹಿರಿಯ ಚೇತನ ಕಯ್ಯಾರರ
ಕುರಿತು ಮಾತನಾಡಿದರು.
ಬಳಿಕ
ಅಗಲಿದ ಆ ದಿವ್ಯಾತ್ಮದ ಚಿರಶಾಂತಿಗಾಗಿ
ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
Tuesday, 4 August 2015
Subscribe to:
Posts (Atom)