ABOUT US

GVHSS KUNJATHUR is a Government Vocational Higher Secondary School which is situated at the northernmost end of Kerala State. Established on 1908, it is a bilingual school situated in the border area of Kerala and Karnataka states. About 900 pupils are studying here at present.
History of the school:  
Esablished in 1908, the School fuctioned as Kanwatheertha Elementary school till 1917. In 1918, the School was renamed as "Kunjathur Board Elementary School".In 1958 it was upgraded as "Kunjathur UP School"and in 1974-75 as "Kunjathur High School".From 01/06/1981 LP Section was seperated. Vocational Higher Secondary section was started on 30-10-1991.Upto 1987 only Kannada medium was there. Thereafter Malayalam section was commencedalong with Kannada medium.


ಜಿ.ವಿ.ಎಚ್.ಎಸ್.ಎಸ್. ಕುಂಜತ್ತೂರು
ಮುನ್ನುಡಿ
ವಿದ್ಯೆಗಿಂತ ಅಧಿಕ ಧನವಿಲ್ಲ – ನಾಣ್ಣುಡಿಯಂತೆ ವಿದ್ಯಾಲಯಳೆಲ್ಲವುಗಳು ಅಂತಿಮ ಲಕ್ಷ್ಯ ಎ೦ದೂ ನಾಶವಾಗದ
ಯಾರಿಂದರಲೂ ಕದಿಯಲಾಗದ ಉತ್ತಮ ಜ್ಞಾನಸಂಪಾದನೆಗಿರುವ ಅವಕಾಶವನ್ನು ಎಲ್ಲರಿಗೂ ಒದಗಿಸಕೊಡುವುದಾಗಿದೆ. ಈ ಮಹತ್ತರವಾದ ಧ್ಯೇಯದೊಂದಿಗೆ ಕುಂಜತ್ತೂರು ಗ್ರಾಮದ 3ನೇ ವಾರ್ಡಿನಲ್ಲಿರುವ ತೂಮಿನಾಡಿನಲ್ಲಿ ಕುಂಜತ್ತೂರು ಪ್ರೌಢಶಾಲೆಯು ಕಾರ್ಯಾಚರಿಸುತ್ತದೆ.
ಕುಂಜತ್ತೂರು ಪ್ರೌಢಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 575 ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿಗೆ ಸುತ್ತಮುತ್ತಲಿನ ಪ್ರದೇಶಗಳಾದ ಕಣ್ವತೀರ್ಥ, ಮಾಡ, ಬೆಂಗರೆ, ಅಂಬತ್ತಡಿ, ಗೇರುಕಟ್ಟೆ, ಮಚ್ಚಂಪಾಡಿ, ಉದಯನಗರ, ಪದವು, ಮಹಾಲಿಂಗೇಶ್ವರ, ಸಣ್ಣಡ್ಕ, ಐಗೋಡಿ ಮುಂತಾದ ಕಡೆಗಳಿಂದಲ್ಲದೆ ಮಂಜೇಶ್ವರ ಹತ್ತಿರ ಕರ್ನಾಟಕದಿಂದಲೂ ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿರುವುದುಸಂತಸದ ಸಂಗತಿ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿಗೆ ವಿದ್ಯಾರ್ಥಿಗಳು ಆಗಮಿಸಲು ಕಾರಣ ಸುತ್ತುಮುತ್ತಲಿನ feeding ಶಾಲೆಗಳು ಅವುಗಳೆಂದರೆ ಜಿ.ಎಲ್.ಪಿ.ಎಸ್ ಜಿ.ಎಲ್.ಪಿ.ಎಸ್ ಮಾಡ,ಜಿ.ಎಲ್.ಪಿ.ಎಸ್ ಕಣ್ವತೀರ್ಥ,ಜಿ.ಎಲ್.ಪಿ.ಎಸ್ ಬಡಾಜೆ,ಜಿ.ಎಲ್.ಪಿ.ಎಸ್ ಭಗವತಿ,ಜಿ.ಎಲ್.ಪಿ.ಎಸ್ ಉದ್ಯಾವರ,ಜಿ.ಎಲ್.ಪಿ.ಎಸ್ ಪಾವೂರು,ಜಿ.ಎಲ್.ಪಿ.ಎಸ್ ಕುಂಜತ್ತೂರು,ಜಿ.ಎಲ್.ಪಿ.ಎಸ್ ತಲಪಾಡಿ ಮುಂತಾದವುಗಳು.
ಕುಂಜತ್ತೂರು ಪ್ರೌಢಶಾಲೆಗೆ ಒಂದು ಭವ್ಯವಾದ ಇತಿಹಾಸವಿದೆ. ಈ ಶಾಲೆಯು ರಾಷ್ಟ್ಕೀಯ ಹೆದ್ದಾರಿ ಎನ್.ಎಚ್-17ಗೆ ಸಮೀಪವಿದೆ. ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಗಡಿಪ್ರದೇಶದ ತೂಮಿನಾಡು ಎ೦ಬಲ್ಲಿ ಇದೆ. ಕೇರಳದ ಅತೀ ಉತ್ತರದ ಹೈಸ್ಕೂಲ್ ಎ೦ಬ ಹೆಗ್ಗಳಿಕೆಯನ್ನೂ ಇದು ಪಡೆದಿದೆ. 1908ರಲ್ಲಿ ಕಣ್ವತೀರ್ಥ ಎಲಿಮೆಂಟರಿ ಶಾಲೆ ಎ೦ಬ ಹೆಸರಿನಲ್ಲಿ ಆರಂಭವಾದ ಈ ಶಾಲೆಯು ಹತ್ತು ವರ್ಷಗಳ ಬಳಿಕ 1918ರಲ್ಲಿ ಕುಂಜತ್ತೂರು ಬೋರ್ಡ್ ಎಲಿಂಮೆಂಟರಿ ಶಾಲೆ ಎ೦ದು ಮರುನಾಮಕರಣಗೊಂಡು ಕಾರ್ಯಪ್ರವೃತ್ತವಾಯಿತು.
1958ರಲ್ಲಿ ಈ ಶಾಲೆಯು ಅಪ್ಪರ್ ಪ್ರೈಮರಿ ಶಾಲೆಯಾಗಿ ಭಡ್ತಿಗೊಂಡು 1974-75ರಲ್ಲಿ ಪ್ರೌಢಶಾಲೆಯಾಗಿ ವಿಕಾಸಗೊಂಡು ನಾಡಿನ ಮಕ್ಕಳ ಜ್ಞಾನತೃಷೆಯನ್ನು ನೀಗುಸುತ್ತಾ ಬಂದಿದೆ. 1977ರಲ್ಲಿ ಎಸ್.ಎಸ್.ಎಲ್.ಸಿ ಯ ಪ್ರಥಮ ತಂಡವು ಶಾಲೆಯಿಂದ ಹೊರಬಂದಿತು. 1981ರಲ್ಲಿ ಎಲ್.ಪಿ ವಿಭಾಗವು ಬೇರ್ಪಟ್ಟು ಪ್ರತ್ಯೇಕ ಶಾಲೆಯಾಗಿ ಕಾರ್ಯವೆಸಗಲಾರಭಿಸಿತು.
1977-80ರ ಕಾಲಾವಧಿಯಲ್ಲಿ ಕೇರಳ ಸರಕಾರದಿಂದ 10ಲಕ್ಷ ರೂಪಾಯಿ ಅನುದಾನ ದೊರೆತು ಈಗ ಕಾಣುತ್ತಿರುವ ಎರಡಂತಸ್ತಿನ ಎರಡು ಕಟ್ಟಡಗಳನ್ನು ನಿರ್ಮಿಸಲಾಯಿತು. ಸರಕಾರದ ಅನುದಾನ ಮಾತ್ರವಲ್ಲದೆ, ಈ ಊರಿನ ಸೇವೆಗೆ ತತ್ಪರತೆಯಿಂದ ದುಡಿಯುತ್ತಿದ್ದ ಸಂಘಸಂಸ್ಥೆಗಳಾದ ನಸ್ರತುಲ್ಲ ಇಸ್ಲಾಂ ಜಮಾತ್ ಬೊಂಬಾಯಿ, ಉದ್ಯಾವರ ಬೋವಿ ವಿದ್ಯಾದಾಯಿ ಸಂಘ, ಶಾಲಾ ರಕ್ಷಕ-ಶಿಕ್ಷಕ ಸಂಘ, ಮಾನ್ಯ ಕರ್ನಾಟಕ ಸರಕಾರ ಹಾಗೂ ಊರ ಮತ್ತು ಪರಊರ ದಾನಿಗಳು ಈ ಸುಂದರ ಶಾಲೆಯ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. 1981ರಲ್ಲಿ ಕೇರಳ ಸರಕಾರದ ನೀರಾವರಿ ಸಚಿವರಾಗಿದ್ದ ಡಾ| ಸುಬ್ಬರಾವ್ ಈ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.
ಕೇವಲ ಕನ್ನಡ ಮಾಧ್ಯಮದಲ್ಲಿ ಮಾತ್ರವೇ ಕಲಿಕೆ ನಡೆಯುತ್ತಿದ್ದ ಈ ಶಾಲೆಯಲ್ಲಿ 1987ರಲ್ಲಿ ಮಲಯಾಳ ಮಾಧ್ಯಮ 5ನೇ ತರಗತಿಯು ಆರಂಭವಾಯಿತು. ಬಳಿಕ ಈ ಶಾಲೆಯು 30-10-1991ರಲ್ಲಿ VHSE ಯಾಗಿ ಶ್ರೀ ಚೆರ್ಕಳಂ ಅಬ್ದುಲ್ಲ ಅವರಿಂದ ಉದ್ಘಾಟನೆಗೊಂಡು DPCO, MAINTAINANCE REPAIR OF TWO AND THREE WHEELERS ತರಬೇತಿ ನೀಡಲು ತೊಡಗಿ ಒಂದು ವರ್ಷದ ಬಳಿಕ DPCO ಮತ್ತು MRDA ತರಗತಿಗಳು ಆರಂಭವಾದುವು. ಪ್ರಕೃತ VHSE ವಿಭಾಗದಲ್ಲಿ ಕಂಪ್ಯೂಟರ್ ವಿಭಾಗವೂ ಆರಂಭಗೊಂಡಿದೆ.
ಕೇರಳ ಪ್ರಾಂತ್ಯದ ಅತೀ ಉತ್ತರದ ಗಡಿಯಲ್ಲಿ ಈ ಶಾಲೆಯು ನೆಲೆ ನಿಂತಿದ್ದರೂ ಇಲ್ಲಿ ಹಲವಾರು ಬಾರಿ ಜಿಲ್ಲೆ ಹಾಗೂ ಉಪಜಿಲ್ಲೆಯ ಬೇರೆ ಬೇರೆ ಶೈಕ್ಷಣಿಕ ಚಟುವಟಿಕೆಗಳು ನಡೆದಿವೆ. ಅವುಗಳಲ್ಲಿ ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಜಿಲ್ಲಾ ಜಂಬೂರಿ, ಸುವರ್ಣ ಕೇರಳ ಆಘೋಷ, ಮಂಜೇಶ್ವರ ಉಪಜಿಲ್ಲಾ ಯುವಜನೋತ್ಸವ, ಹಿಂದಿ ಕಲೋತ್ಸವ, SPCಕ್ಯಾಂಪ್ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಮೊದಲಾದವು ಆತಿಥೇಯರಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಯಾವುದೇ ಅಡೆತಡೆಗಳಿಲ್ಲದೆ ವಹಿಸಿಕೊಂಡ ಚಟುವಟಿಕೆಗಳು ಸುವ್ಯವಸ್ಥಿತವಾಗಿ ನಡೆದಿವೆ. ಕಳೆದ 4 ವರ್ಷಗಳಿಂದ ಈ ವಿದ್ಯಾಲಯದಲ್ಲಿ SPC ದಳವು ಕಾರ್ಯಾಚರಿಸುತ್ತಿದ್ದು ಸುಮಾರು 80ರಷ್ಟು ವಿದ್ಯಾರ್ಥಿಗಳು ಪೋಲೀಸ್ ತುಕಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಕೇರಳ ರಾಜಧಾನಿಯಿಂದ ಅತ್ಯಂತ ದೂರದಲ್ಲಿರುವ ಪ್ರದೇಶವಾದುದರಿಂದ ಸರಕಾರದ ಯೋಜನೆಗಳು ಇಲ್ಲಿಗೆ ತಲಪುವಾಗ ತಡವಾಗುವುದು ಮಾತ್ರವಲ್ಲ, ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರು ಆರ್ಥಿಕವಾಗಿಯೂ, ಶೈಕ್ಷಣಿಕವಾಗಿಯೂ ಸಬಲರಲ್ಲದ ಕಾರಣ ಈ ಪ್ರದೇಶದ ಅಭಿವೃದ್ಧಿಯು ಆಮೆನಡಿಗೆಯಲ್ಲಿ ಸಾಗುತ್ತಿದೆ. ಆದರೂ ಶಾಲೆಯ ಶಿಕ್ಷಕ-ರಕ್ಷಕ ಸಂಘ, ಊರಿನ ಸಂಘ-ಸಂಸ್ಥೆಗಳು ಶಾಲೆಯ ವಿದ್ಯಾಭ್ಯಾಸ ಅಭಿವೃದ್ಧಿಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿ ಕಳೆದ ಶೈಕ್ಷಣಿಕ ವರ್ಷ SSLC ಗೆ ಹಾಜರಾದ 142 ವಿದ್ಯಾರ್ಥಿಗಳ ಪೈಕಿ 141 ವಿದ್ಯಾರ್ಥಿಗಳು ತೇರ್ಗಡೆಯಾಗಿ 99% ಫಲಿತಾಂಶ ಹೈಸ್ಕೂಲ್ ವಿಭಾಗಕ್ಕೆ ಬಂದಿದೆ. ಅಲ್ಲದೆ ಮಂಜೇಶ್ವರ ಉಪಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲೇ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಅಂತೆಯೆ VHSEಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಹಾಗೂ MRDA ವಿಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದೆ.
ನಮ್ಮ ಶಾಲೆಯಲ್ಲಿ 4.76 ಎಕರೆ ಭೂಮಿಯನ್ನು ಹೊಂದಿದ್ದು ಪ್ರಕೃತ 5ರಿಂದ VHSE ಯವರೆಗೆ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 5ನೇ ತರಗತಿಯಿಂದ 10ನೇ ತರಗತಿಯವರೆಗೆ ಒಟ್ಟು 568 ವಿದ್ಯಾರ್ಥಿಗಳಿದ್ದು 18 ಡಿವಿಜನುಗಳು ಅಸ್ತಿತ್ವದಲ್ಲಿವೆ. ಹೈಸ್ಕೂಲ್ ವಿಭಾಗದಲ್ಲಿ 23 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಕಲೋತ್ಸವ, ಕ್ರೀಡಾಸ್ಪರ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಒಬ್ಬ ವಿದ್ಯಾರ್ಥಿಯು ರಾಜ್ಯಮಟ್ಟದ ಆಟೋಟ ಸ್ಪರ್ಧಗೆ ಆಯ್ಕೆಯಾಗಿದ್ದಾರೆ.
ಸಮಸ್ಯೆಗಳು :-
ಪ್ರಕೃತ ಶಾಲೆಗೆ ಸುಸಜ್ಜಿತವಾದ ಒಂದು ಗ್ರಂಥಾಲಯದ ಹಾಗೂ Smart roomನ ಆವಶ್ಯಕತೆಯಿದೆ. ಶಾಲೆಯಲ್ಲಿರುವ ಗ್ರಂಥಾಲಯವು ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿರುವುದರಿಂದ ವಿದ್ಯಾರ್ಥಗಳು ಹೆಚ್ಚಿನ ಓದಿಗಾಗಿ ಗ್ರಂಥಾಲಯದ ಪುಸ್ತಕಗಳನ್ನು ಬಳಸಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ. ಅಂತೆಯೇ ಎಸ್.ಎಸ್.ಎಯ 52 ಲಕ್ಷದ 8 ಕೊಠಡಿಗಳ ಕಟ್ಟದ ಹಾಗೂ ಜಿಲ್ಲಾ ಪಂಚಾಯತಿನ 4 ಕೊಠಡಿಗಳ ಕಟ್ಟಡವು ತರಗತಿಗಳ ಕೊರತೆಯನ್ನು ತಕ್ಕಮಟ್ಟಿಗೆ ನೀಗಿಸಿದ್ದರೂ smar roomನ ಅಗತ್ಯವಿರುವ ವಿದ್ಯುತ್ತೀಕರಣದ ವ್ಯವಸ್ಥೆ ಇಲ್ಲದಿರುವುದರಿಂದ ಅತ್ಯಾಧುನಿಕ ರೀತಿಯಲ್ಲಿ ಪಾಠಪ್ರವಚನಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.
ಕುಡಿಯುವ ನೀರಿನ ವ್ಯವಸ್ಥೆ
ಪ್ರಸ್ತುತ ಶಾಲಾ ಆವರಣದಲ್ಲಿ ಒಂದು ಬಾವಿ ಹಾಗೂ ಬೋರ್ ವೆಲ್ ಇದ್ದು ಬಾವಿಯ ನೀರು ಬೇಸಿಗೆಯ ಆರಂಭಕ್ಕಾಗುವಾಗಲೇ ಕಡಿಮೆಯಾಗುತ್ತದೆ. ಬೋರ್ ವೆಲ್ಗೆ ಅಳವಡಿಸಿದ ಮೋಟರ್ ಹಾಳಾಗಿದ್ದು ದುರಸ್ಥಿ ಮಾಡಬೇಕಾದ ಆವಶ್ಯಕತೆಯಿದೆ.
ಶೌಚಾಲಯ
ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ಶೌಚಾಲಯ ಉಪಯೋಗಕ್ಕೆ ಯೋಗ್ಯವಾಗಿದ್ದು ಗಂಡುಮಕ್ಕಳ ಶೌಚಾಲಯವು ಉಪಯೋಗಕ್ಕೆ ಅನರ್ಹವಾಗಿದೆ. ಗಂಡುಮಕ್ಕಳಿಗಾಗಿ ಹೊಸ ಒಂದು ಶೌಚಾಲಯದ ನಿರ್ಮಾಣವಾಗಿದ್ದರೂ ಅದು ಎಲ್ಲಾ ಮಕ್ಕಳಿಗೂ ಸಾಕಾಗುತ್ತಿಲ್ಲ.
ತರಗತಿ ಕೊಠಡಿಗಳ ದುರಸ್ತಿ ಹಾಗೂ ಸುಣ್ಣಬಣ್ಣ
ಶಾಲೆಯ ಹಿರಿಯ ಪ್ರಾಥಮಿಕ ವಿಭಾಗ, ಒಂಭತ್ತನೇ ತರಗತಿ ವಿಭಾಗ ಎರಡು ಸ್ಟಾಫ್ ರೂಮುಗಳು ಹಳೆಯ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದು ಇಲ್ಲಿನ ತರಗತಿ ಕೊಠಡಿಗಳ ಸ್ಥಿತಿ ತುಂಬಾ ದಯನೀಯವಾಗಿದೆ. ಕೊಠಡಿಗಳಿಗೆ ಸರಿಯಾದ ಕಿಟಿಕಿ ಬಾಗಿಲುಗಳಿಲ್ಲ. ನೆಲದಲ್ಲೆಲ್ಲಾ ಹೊಂಡಗಳಿವೆ. ಸರಿಯಾದ ಶಿಕ್ಷಣಕ್ರಮಕ್ಕೆ ಮಕ್ಕಳಿಗೆ ಬೇಕಾದ ಸೌಕರ್ಯ ಮಾಡಿಕೊಡುವುದು ಆವಶ್ಯವಾಗಿದೆ. ವ್ಯವಸ್ಥಿತವಾದ ಕರಿಹಲಗೆ, ಕಟ್ಟಡಗಳಿಗೆ ಸುಣ್ಣ, ಬಣ್ಣ ಆಗಬೇಕಿದ್ದು ಮುರಿದಿರುವ ಫರ್ನೀಚರುಗಳ ರಿಪೇರಿ ಆಗಬೇಕಿದೆ.
ಆಟದ ಮೈದಾನ
ಶಾಲೆಗೆ 400ಮೀ ಟ್ರಾಕಿನ ಆಟದ ಮೈದಾನವಿದ ಅಗತ್ಯವಿದೆ. ಈಗಾಗಲೇಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನಿರ್ಮೂಲ ಮಾಡಿದರೆ ಈ ಅಗತ್ಯಕ್ಕಿರುವ ಸ್ಥಳಾವಕಾಶ ಸಿಗಬಹುದಾಗಿದೆ.
ಕಂಪ್ಯೂಟರ್
ಪ್ರಕೃತ ಶಾಲೆಯಲ್ಲಿ ಕಂಪ್ಯೂಟರ್ ಹಾಗೂ ಲ್ಯಾಪ್ ಟೋಪ್, 2 ಎಲ್.ಸಿ.ಡಿ ಪ್ರೋಜೆಕ್ಟರುಗಳು, 2 ಲೇಸರ್ ಪ್ರಿಂಟರುಗಳಿವೆ. ಸರಿಯಾದ ಐ.ಸಿ.ಟಿ ಬೋಧನೆಗೆ ಕಂಪ್ಯೂಟರುಗಳ ಮತ್ತು ಲ್ಯಾಪ್ ಟೋಪುಗಳ ಅಗತ್ಯವಿದೆ.
Sports Kit
ಶಾಲೆಯ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಗಳಲ್ಲಿ ಇತ್ತೀಚೆಗೆ ಉತ್ತಮ ಸಾಧನೆಗೈಯುತ್ತಿರುವುದರಿಂದ Sports kit ನ ಹಾಗೂ ಒಂದು ಬ್ಯಾಂಡ್ ಸೆಟ್ ಅಗತ್ಯವಿದೆ. ಇದಕ್ಕೆ ಅಂದಾಜು 30,000 ರೂಪಾಯಿ ಬೇಕಾಗಬಹುದು.
ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ
ಕಲಿಕೆಗೆ ಸಂಬಂಧಿಸಿದ ಐತಿಹಾಸಿಕ ಪ್ರೇಕ್ಷಣೀಯ ಹಾಗೂ ವೈಜ್ಞಾನಿಕ ಕೇಂದ್ರಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡುವಂತೆ .ಮಾಡಲು ಪ್ರವಾಸ ಅತೀ ಅಗತ್ಯವಾಗಿದೆ. ಇದರಿಂದ ಪ್ರತ್ಯಕ್ಷ ಪಾಠಾನುಭವ ಮಕ್ಕಳಿಗೆ ದೊರಕುತ್ತದೆ. 9 ಮತ್ತು 10ನೇ ತರಗತಿಯ ಆಯ್ದ 100 ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ಅನುದಾನದ ಅಗತ್ಯವಿದೆ.
ಪರಿಹಾರ ಬೋಧನೆ
ಕಡುಬಡ ಕುಟುಂಬದ ಹಾಗೂ ನಿರಕ್ಷರ ಪೋಷಕರ ಮನೆಯಿಂದ ಬರುವ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಬೆಳಗ್ಗೆ ಹಾಗೂ ಸಾಯಂಕಾಲ ಪ್ರತ್ಯೇಕ ಬೋಧನ ನೀಡುವ ಯೋಜನೆ ಇದೆ. ಅಂತಹ ವಿದ್ಯಾರ್ಥಿಗಳಿಗೆ ಸಾಯಂಕಾಲದ ಉಪಹಾರಕ್ಕಾಗಿ ಪ್ರತ್ಯೇಕ ಅನುದಾನದ ಅಗತ್ಯವಿದೆ.
ಶಿಕ್ಷಕರ ಶೈಕ್ಷಣಿಕ ಪ್ರವಾಸ
ದೇಶ ಸುತ್ತು, ಕೋಶ ಓದು ಎ೦ಬಂತೆ ಕೇವಲ ಪುಸ್ತಕ ಓದುವುದರಿಂದ ಮಾತ್ರ ಜ್ಞಾನ ಸಂಪಾದನೆಯಾಗದು. ಪ್ರಸಿದ್ಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಜ್ಞಾನವನ್ನು ಅಧ್ಯಾಪಕರು ಸ್ವಯಂ ಸಂಗ್ರಹಿಸಲು ಶೈಕ್ಷಣಿಕ ಪ್ರವಾಸ ಅತೀ ಅಗತ್ಯ. ಅಧ್ಯಾಪಕರ ಪ್ರವಾಸಕ್ಕಾಗಿ 20,000 ರೂಗಳ ಅನುದಾನದ ಅಗತ್ಯವಿದೆ.

No comments:

Post a Comment