Friday, 31 October 2014


ಶಿಕ್ಷಕ ರಕ್ಷಕ ಸಂಘದ ಮಹಾಸಭೆ
ಕುಂಜತ್ತೂರು,ಒಕ್ಟೋಬರ್ 30: ಕುಂಜತ್ತೂರು ಸರಕಾರೀ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮುಶ್ರತ್ ಜಹಾನ್ ನೆರವೇರಿಸಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಫ್ತಾಬ್.ಪಿ.ಸಿ. ಅವರು ವಹಿಸಿ ಶಿಕ್ಷಕ ರಕ್ಷಕ ಸಂಘದ ಕಳೆದ ವರ್ಷದ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರನ್.ಟಿ. ಅವರು ಗತ ವರ್ಷದ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕರಾದ ಶ್ರೀ ರಾಜಕುಮಾರ್ ವರದಿ ಮಂಡಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಶ್ಯಾಮಲ.ಕೆ. , ಶಿಕ್ಷಕರಾದ ಶ್ರೀ ಬಾಲಕೃಷ್ಣ.ಜಿ.ಮತ್ತು ಶ್ರೀ ಕಿಶೋರ್ ಕುಮಾರ್ ವಿವಿಧ ವಿಭಾಗಗಳ ಲೆಕ್ಕಪತ್ರ ಮಂಡಿಸಿದರು. 2013-14 ನೇ ವರ್ಷದ ಎಸ್.ಎಸ್.ಎಲ್.ಸಿ. ಹಾಗೂ ವಿ.ಹೆಚ್.ಎಸ್..ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2014-15ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಮೊಹಮ್ಮದ್ಅಫ್ತಾಬ್.ಪಿ.ಸಿ. ಹಾಗೂ ಉಪಾಧ್ಯಕ್ಷರಾಗಿ ಶ್ರೀ ಅಬ್ದುಲ್ಲ ಅವರು ಸರ್ವಾನುಮತದಿಂದ ಆಯ್ಕೆಯಾದರು.ಶಿಕ್ಷಕರಾದ ಶ್ರೀ ರಾಕೇಶ್ ಸ್ವಾಗತಿಸಿ ಶ್ರೀ ಉಮೇಶ್ ವಂದಿಸಿದರು. ಶಿಕ್ಷಕರಾದ ಶ್ರೀ ದಿನೇಶ್.ವಿ. ಕಾರ್ಯಕ್ರಮ ನಿರೂಪಿಸಿದರು.

No comments:

Post a Comment