ಓದುವ
ಹವ್ಯಾಸದಿಂದ ವ್ಯಕ್ತಿತ್ವ ವಿಕಸನ
ಸಾಧ್ಯ
ಕುಂಜತ್ತೂರು:
ಕುಂಜತ್ತೂರು
ಜಿ.ವಿ.ಹೆಚ್.ಎಚ್.ಎಸ್.ಎಸ್.ಶಾಲೆಯಲ್ಲಿ
ವಾಚನಾ ಸಪ್ತಾಹದ ಅಂಗವಾಗಿ ನಡೆದ
ಪುಸ್ತಕ ಪ್ರದರ್ಶನ ಹಾಗೂ ವಿವಿಧ
ಸಾಹಿತ್ಯಿಕ ಸ್ಫರ್ಧೆಗಳ ಉದ್ಘಾಟನೆಯು
ದಿನಾಂಕ 24-6-2015
ರ
ಬುಧವಾರದಂದು ಶಾಲಾ ಸಭಾಂಗಣದಲ್ಲಿ
ಜರುಗಿತು.
ಉದ್ಘಾಟನೆಯನ್ನು
ನೆರವೇರಿಸಿ ಮಾತನಾಡಿದ ಪುಸ್ತಕ
ಪ್ರೇಮಿ ಹಾಗೂ ಪುಸ್ತಕ ಸಂಗ್ರಹಗಾರ
ಶ್ರೀ ಕೆ.ಸುರೇಂದ್ರ
ಮಾತನಾಡುತ್ತಾ ಓದುವ ಹಾಗೂ ಪುಸ್ತಕ
ಸಂಗ್ರಹಿಸುವ ಹವ್ಯಾಸದಿಂದಾಗಿ
ನಮ್ಮ ವ್ಯಕ್ತಿತ್ವವನ್ನು
ವಿಕಸನಗೊಳಿಸಲು ಸಾಧ್ಯವಾಗುತ್ತದೆಯೆಂದು
ನುಡಿದರು.
ಈ
ಸಂಧರ್ಭದಲ್ಲಿ ಶ್ರೀ ಕೆ.ಸುರೇಂದ್ರ
ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ದಿನೇಶ್.ವಿ.
ಹಿರಿಯ
ಶಿಕ್ಷಕ ಶ್ರೀ ರಾಜಕುಮಾರ್
ಉಪಸ್ಧಿತರಿದ್ದರು.
ಕಾರ್ಯಕ್ರಮದ
ಸಂಯೋಜಕಿ ಶ್ರೀಮತಿ ಉಷಾರಾಣಿ
ಸ್ವಾಗತಿಸಿ ಶಿಕ್ಷಕರಾದ ಶ್ರೀ
ಸುರೇಶನ್ ವಂದಿಸಿದರು.
ಶಾಲಾ
ವಿದ್ಯಾರ್ಥಿಗಳು ಪ್ರದರ್ಶನದಲ್ಲಿರಿಸಿದ
ಪುಸ್ತಕಗಳನ್ನು ವೀಕ್ಷಿಸಿ
ಮೆಚ್ಚುಗೆ ವ್ಯಕ್ತಪಡಿಸಿದರು.
ವಾಚನಾ
ಸಪ್ತಾಹದ ಅಂಗವಾಗಿ ಇಂಗ್ಲೀಷ್
ಓದುವ ಸ್ಫರ್ಧೆ,
ಪುಸ್ತಕಗಳನ್ನು
ಓದಿ ಆಸ್ವಾದನಾ ಟಿಪ್ಪಣಿ ಬರೆಯುವ
ಸ್ಫರ್ಧೆ,
ಭಾಷಾಂತರಿಸುವ
ಸ್ಫರ್ಧೆ ಮುಂತಾದ ಸಾಹಿತ್ಯಿಕ
ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
No comments:
Post a Comment