Tuesday, 1 November 2016
Wednesday, 13 July 2016
ಸಮವಸ್ತ್ರ ವಿತರಣೆ
ಸರಕಾರಿ
ಪ್ರೌಢಶಾಲೆ ಕುಂಜತ್ತೂರು -
ಸಮವಸ್ತ್ರ
ವಿತರಣೆ
ಕುಂಜತ್ತೂರು:
ಶಾಲೆಯ
ಸಮವಸ್ತ್ರ ವಿತರಣೆಯ ಸಮಾರಂಭವು
ಸರಕಾರಿ ಪ್ರೌಢಶಾಲೆ ಕುಂಜತ್ತೂರಿನಲ್ಲಿ
ತಾರೀಕು 12-07-2016
ರ
ಮಂಗಳವಾರ ನೆರವೇರಿತು.
ಎಸ್.ಎಸ್.ಎ
ಮಂಜೇಶ್ವರದ ಪ್ರಭಾರ ಪ್ರೋಜೆಕ್ಟ್
ಆಫೀಸರ್ ಶ್ರೀಮತಿ ರೋಜ ಅವರು
ಮಕ್ಕಳಿಗೆ ಸಮವಸ್ತ್ರವನ್ನು
ವಿತರಿಸಿ ಸರಕಾರಿ ಶಾಲೆಯ ಹೆಣ್ಮಕ್ಕಳು,
ಬಡವರು,
ಬಿ.ಪಿ.ಎಲ್
ಕಾರ್ಡುದಾರರು,
ಎಸ್.ಸಿ,
ಎಸ್.ಟಿ
ಮಕ್ಕಳು ಇದರ ಸಂಪೂರ್ಣ ಪ್ರಯೋಜನವನ್ನು
ಪಡೆದಿದ್ದಾರೆ ಎ೦ದು ತಿಳಿಸಿದರು.
ಪಿ.ಟಿ.ಎ
ಪ್ರಸಿಡೆಂಟ್ ಶ್ರೀ ಯು.ಎಚ್.ಅಬ್ದುಲ್
ರಹಿಮಾನ್ ಅವರು ಸಮಾರಂಭವನ್ನು
ಉದ್ಘಾಟಿಸಿದರು.
ಮುಖ್ಯೋಪಾಧ್ಯಾಯರಾದ
ಶ್ರೀ ಅಗಸ್ಟಿನ್ ಬರ್ನಾಡ್ ಅವರು
ಸಮಾರಂಭದಲ್ಲಿ ಅಧ್ಯಕ್ಷರಾಗಿದ್ದರು.
ಹಿರಿಯ
ಅಧ್ಯಾಪಕಿ ಶ್ರೀಮತಿ ಪ್ರಸನ್ನಕುಮಾರಿ
ಸ್ವಾಗತಿಸಿ,
ಶ್ರೀಮತಿ
ಅಮಿತಾ ವಂದಿಸಿದರು,
ಉಪಾಧ್ಯಕ್ಷರಾದ
ಶ್ರೀ ಕೆ.ಎ೦.
ಅಬ್ದುಲ್
ಖಾದರ್ ಶುಭಾಸಂಶನೆಗೈದರು.
Saturday, 25 June 2016
ವಿವಿಧ ಕ್ಲಬ್ಬುಗಳ ಉದ್ಘಾಟನೆ
ಶಾಲೆಯ
ವಿವಿಧ ಕ್ಲಬ್ಬುಗಳ ಉದ್ಘಾಟನೆ
ಕುಂಜತ್ತೂರು:
ಸರಕಾರಿ
ಪ್ರೌಢಶಾಲೆ ಕುಂಜತ್ತೂರಿನಲ್ಲಿ
ದಿನಾಂಕ 21-06-2016ರಂದು
ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ
ಪೂರಕವಾದ ವಿವಿಧ ಕ್ಲಬ್ಬುಗಳ
ಹಾಗೂ ORC(Our
Responsibility to Child) ಯ
ಉದ್ಘಾಟನೆಯು ಶಾಲಾ ಸಭಾಂಗಣದಲ್ಲಿ
ನೆರವೇರಿತು.
ಮಂಜೇಶ್ವರ
ಗೋವಿಂದ ಪೈ ಕಾಲೇಜಿನ ಪ್ರಭಾರ
ಪ್ರಾಂಶುಪಾಲರೂ,
ಕನ್ನಡ
ಪ್ರಾಧ್ಯಾಪಕರೂ ಆಗಿರುವ ಶ್ರೀ
ದಿನೇಶ್ ಕುಮಾರ್ ದೀಪ ಬೆಳಗಿಸುವುದರ
ಮೂಲಕ ಕ್ಲಬ್ಬುಗಳನ್ನು ಔಪಚಾರಿಕವಾಗಿ
ಉದ್ಘಾಟಿಸಿದರು.
ಈ
ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು
ಉದ್ದೇಶಿಸಿ ಮಾತನಾಡಿದ ಅವರು
"ಮನಸ್ಸು
ಎ೦ದರೆ ಮ್ಯಾಜಿಕ್ ಬುದ್ಧಿ ಎ೦ದರೆ
ಲಾಜಿಕ್ ಇವೆರಡೂ ಸೇರಿದಾಗ ಬುದ್ಧಿ
ವಿಕಾಸಗೊಳ್ಳುತ್ತದೆ.
ಇದಕ್ಕೆ
ಪೂರಕವಾಗಿ ಕ್ಲಬ್ಬು ಚಟುವಟಿಕೆಗಳು
ಕಾರ್ಯನಿರ್ವಹಿಸುತ್ತವೆ'
ಎ೦ದು
ನುಡಿದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ಅಗಸ್ಟಿನ್ ಬರ್ನಾಡ್ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿ
ಕ್ಲಬ್ಬುಗಳೆಂದರೆ "ಬೌದ್ಧಿಕ
ಚಟುವಟಿಕೆಗಳ ಕಂಬಗಳು'
ನುಡಿದರು.
ಹಿರಿಯ
ಶಿಕ್ಷಕಿ ಶ್ರೀಮತಿ ಪ್ರಸನ್ನ
ಕುಮಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ,
ಹಿರಿಯ
ಶಿಕ್ಷಕರಾದ ಶ್ರೀ ರಾಜಕುಮಾರ್
ಶುಭಹಾರೈಸಿದರು.
ವಿದ್ಯಾರ್ಥಿನಿಯರು
ಪ್ರಾರ್ಥನೆ ಸಲ್ಲಿಸಿದರು.
ವಿದ್ಯಾರ್ಥಿನಿ
ಕುಮಾರಿ ಮೀನಾಕ್ಷಿ ಸ್ವಾಗತಿಸಿ,
ಕುಮಾರಿ
ದೀಕ್ಷಾ ವಂದಿಸಿದಳು.
ಕುಮಾರಿ
ಖದೀಜತ್ ಅಫ್ರೀನ ಕಾರ್ಯಾಕ್ರಮವನ್ನು
ನಿರೂಪಿಸಿದಳು.
ವಿದ್ಯಾರ್ಥಿಗಳಾದ
ದೀಕ್ಷಾ,
ಮೀನಾಕ್ಷಿ,
ಮೆಹನಾಝ್
ಮುಂತಾದವರಿಂದ ಸ್ವರಚಿತ ಕವನವಾಚನ,
ಹಿಂದಿಹಾಡು,
ಭಾಷಣ,
ಕಥಾವಾಚನ
ಮುಂತಾದ ಸಾಹಿತ್ಯಿಕ ಕಾರ್ಯಕ್ರಮಗಳು
ಜರುಗಿದುವು.
ವಿಶ್ವ ಪರಿಸರ ದಿನಾಚರಣೆ
ವಿಶ್ವ
ಪರಿಸರ ದಿನಾಚರಣೆ
ಕುಂಜತ್ತೂರು:
ಸರಕಾರಿ
ಪ್ರೌಢಶಾಲೆ ಕುಂಜತ್ತೂರಿನಲ್ಲಿ
ವಿಶ್ವ ಪರಿಸರ ದಿನಾಚರಣೆಯನ್ನು
ಜೂನ್ 6ರಂದು
ಆಚರಿಸಲಾಯಿತು.
ಎಸಂಬ್ಲಿಯಲ್ಲಿ
ಪರಿಸರ ದಿನಾಚರಣೆಯ ಮಹತ್ವದ ಕುರಿತು
ಶಾಲಾ ಇಕೋ ಕ್ಲಬ್ಬಿನ ಸಂಯೋಜಕಿ
ಶಿಕ್ಷಕಿ ಶ್ರೀಮತಿ ಪ್ರಕಾಶಿನಿ
ಮಾತನಾಡಿದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ಅಗಸ್ಟಿನ್ ಬರ್ನಾಡ್ ಅವರ ನೇತೃತ್ವದಲ್ಲಿ
ವಿದ್ಯಾರ್ಥಿಗಳಿಗೆ ಗಿಡಗಳನ್ನು
ವಿತರಿಸಲಾಯಿತು.
ಯೋಗ ದಿನಾಚರಣೆ
ವಿಶ್ವಯೋಗ
ದಿನಾಚರಣೆ
ಕುಂಜತ್ತೂರು:-
ಸರಕಾರಿ
ಪ್ರೌಢಶಾಲೆ ಕುಂಜತ್ತೂರಿನಲ್ಲಿ
ವಿಶ್ವಯೋಗ ದಿನವನ್ನು ಜೂನ್ 21ರಂದು
ಆಚರಿಸಲಾಯಿತು.
ಶಾಲೆಯ
ನಿವೃತ್ತ ಶಿಕ್ಷಕರೂ,
ಎಸ್.ಎ೦.ಸಿ
ಸದಸ್ಯರೂ ಆಗಿರುವ ಶ್ರೀ ಈಶ್ವರ
ದಿನನಿತ್ಯದ ಬದಕಿನಲ್ಲಿ ಯೋಗದ
ಮಹತ್ವದ ಕುರಿತು ತಿಳಿಸಿದರು.
ಆರೋಗ್ಯ
ಆನಂದದಾಯಕ ಬಾಳಿಗೆ ಯೋಗ ನಮ್ಮ
ಸಹವರ್ತಿಯಾಗಿರಬೇಕು ಎ೦ದು
ನುಡಿದರು.
ಪ್ರಾಣಾಯಾಮದ
ಪ್ರಾತ್ಯಕ್ಷಿಕೆಯನ್ನು ಅವರು
ನೀಡಿ ವಿದ್ಯಾರ್ಥಿಗಳಿಗೆ
ಪ್ರಾಣಾಯಾಮವನ್ನು ಮಾಡುವ ವಿಧಾನವನ್ನು
ಹೇಳಿಕೊಟ್ಟರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ಅಗಸ್ಟಿನ್ ಬರ್ನಾಡ್ ಸ್ವಾಗತಿಸಿ,
ದೈಹಿಕ
ಶಿಕ್ಷಣ ಶಿಕ್ಷಕಿ ಶ್ರೀಮತಿ ಅನಿತಾ
ವಂದಿಸಿದರು.
ಶಾಲ
ಶಿಕ್ಷಕರು ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು.
Subscribe to:
Posts (Atom)