Saturday 25 June 2016

ವಿವಿಧ ಕ್ಲಬ್ಬುಗಳ ಉದ್ಘಾಟನೆ


ಶಾಲೆಯ ವಿವಿಧ ಕ್ಲಬ್ಬುಗಳ ಉದ್ಘಾಟನೆ
ಕುಂಜತ್ತೂರು: ಸರಕಾರಿ ಪ್ರೌಢಶಾಲೆ ಕುಂಜತ್ತೂರಿನಲ್ಲಿ ದಿನಾಂಕ 21-06-2016ರಂದು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ವಿವಿಧ ಕ್ಲಬ್ಬುಗಳ ಹಾಗೂ ORC(Our Responsibility to Child) ಯ ಉದ್ಘಾಟನೆಯು ಶಾಲಾ ಸಭಾಂಗಣದಲ್ಲಿ ನೆರವೇರಿತು. ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಭಾರ ಪ್ರಾಂಶುಪಾಲರೂ, ಕನ್ನಡ ಪ್ರಾಧ್ಯಾಪಕರೂ ಆಗಿರುವ ಶ್ರೀ ದಿನೇಶ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಕ್ಲಬ್ಬುಗಳನ್ನು ಔಪಚಾರಿಕವಾಗಿ ‌ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು "ಮನಸ್ಸು ಎ೦ದರೆ ಮ್ಯಾಜಿಕ್ ಬುದ್ಧಿ ಎ೦ದರೆ ಲಾಜಿಕ್ ಇವೆರಡೂ ಸೇರಿದಾಗ ಬುದ್ಧಿ ವಿಕಾಸಗೊಳ್ಳುತ್ತದೆ. ಇದಕ್ಕೆ ಪೂರಕವಾಗಿ ಕ್ಲಬ್ಬು ಚಟುವಟಿಕೆಗಳು ಕಾರ್ಯನಿರ್ವಹಿಸುತ್ತವೆ' ಎ೦ದು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಗಸ್ಟಿನ್ ಬರ್ನಾಡ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ಲಬ್ಬುಗಳೆಂದರೆ "ಬೌದ್ಧಿಕ ಚಟುವಟಿಕೆಗಳ ಕಂಬಗಳು' ನುಡಿದರು. ಹಿರಿಯ ಶಿಕ್ಷಕಿ ಶ್ರೀಮತಿ ಪ್ರಸನ್ನ ಕುಮಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಿರಿಯ ಶಿಕ್ಷಕರಾದ ಶ್ರೀ ರಾಜಕುಮಾರ್ ಶುಭಹಾರೈಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿನಿ ಕುಮಾರಿ ಮೀನಾಕ್ಷಿ ಸ್ವಾಗತಿಸಿ, ಕುಮಾರಿ ದೀಕ್ಷಾ ವಂದಿಸಿದಳು. ಕುಮಾರಿ ಖದೀಜತ್ ಅಫ್ರೀನ ಕಾರ್ಯಾಕ್ರಮವನ್ನು ನಿರೂಪಿಸಿದಳು. ವಿದ್ಯಾರ್ಥಿಗಳಾದ ದೀಕ್ಷಾ, ಮೀನಾಕ್ಷಿ, ಮೆಹನಾಝ್ ಮುಂತಾದವರಿಂದ ಸ್ವರಚಿತ ಕವನವಾಚನ, ಹಿಂದಿಹಾಡು, ಭಾಷಣ, ಕಥಾವಾಚನ ಮುಂತಾದ ಸಾಹಿತ್ಯಿಕ ಕಾರ್ಯಕ್ರಮಗಳು ಜರುಗಿದುವು.

No comments:

Post a Comment